Thursday, November 11, 2010

ರಾಜ್ಯ ಬಿಜೆಪಿ ಯಲ್ಲಿಮಂಡ್ಯ ನಾಗರಾಜಪ್ಪನವರ ಪಾತ್ರ

                       ರಾಜ್ಯ  ಬಿಜೆಪಿ ಯಲ್ಲಿಮಂಡ್ಯ ನಾಗರಾಜಪ್ಪನವರ ಪಾತ್ರ

                 ಕರ್ನಾಟಕದಲ್ಲಿ ಭಾರತಿಯ ಜನತಾಪಕ್ಷವನ್ನು ಅದಿಕಾರಕ್ಕೆ ತರಲು ಪ್ರಮುಖಕಾರಣಕರ್ತರಾದ ಬಿಎಸ್ ಯಡಿಯೂರಪ್ಪನವರ ಸತತ ೩೫ವರ್ಷಗಳಿಂದ ಅಬಿರತ ಶ್ರಮದ ನಂತರ ಅದಿಕಾರಕ್ಕ ಬರಲು ಬಿಎಸ್ ಯಡಿಯೂರಪ್ಪನವರ ಶ್ರಮ ಅಶ್ಟಿಷ್ಟಲ್ಲ. ಕರ್ನಾಟಕದಲ್ಲಿ ಎಲ್ಲ ಬಾಗಗಳಲ್ಲೂ ಬಿಜೆಪಿಯು ಸದ್ರುಡಗೊಂಡಿರುವಂತೆ ಅವರ ತವರು ಜಿಲ್ಲೆಯಾದ ಮಂಡ್ಯದಲ್ಲೂ ಬಿಜೆಪಿಯನ್ನು ಬಲಪಡಿಸಲು ನಾಗರಾಜಪ್ಪರವರಂತ ಪ್ರಾಮಾಣಿಕ ಕಾರ್ಯಕರ್ತರನ್ನ ಮುಂಚೂಣಿಯಲ್ಲಿ ತಂದು ಮಂಡ್ಯಜಿಲ್ಲಾ ಬಿಜೆಪಿ ಘಟಕವು ಪ್ರಬಲಗೊಳ್ಳುವಂತೆ ಮಾಡಿದ್ದಾರೆ .
ಮಂಡ್ಯಜಿಲ್ಲೆಯ ಮಳವಳ್ಳಿ ತಾಲುಕಿನ ಚಿಕ್ಕಮುಲಗೂಡು ಗ್ರಾಮದ ಜಿಮಿನ್ದಾರರರಾದ ಬಸವರಾಜಪ್ಪ ಮತ್ತು ಚಿಕ್ಕತಾಯಮ್ಮನವರ ಮಗನಾದ ಶ್ರಿಯುತ ನಾಗರಾಜಪ್ಪನವರು ಖ್ರುಷಿಯಲ್ಲಿ ಬಿಎಸ್ಸಿ ಪದವಿಯನ್ನು ಪಡದಿದ್ದಾರೆ  ಇವರು ಮುಲತಃ ಅರೆಸ್ಸಸ್ಸ್ ಕಾರ್ಯಕರ್ತರಾಗಿದ್ದು ಪ್ರಾರಂಬದಿಂದಲೂ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿ ಸೇವೆಸಲ್ಲಿಸಿದ್ದಾರೆ . ಇವರು ಪ್ರಾರಂಬದಲ್ಲಿ
"ಬಸವ" ಸಮಿತಿಯ ಅದ್ಯಕ್ಷರಾಗಿ ಹಲವಾರು ರೀತಿಯ ಸಮಾಜ ಸೇವಾ ಕಾರ್ಯಕ್ರಮಗಳಮೂಲಕ ಜನತ ಸೇವೆಯನ್ನು ಮಾಡಿಕೊಂಡು ಬಂದಿರುತ್ತಾರೆ ಅಲ್ಲದೆ ಮೈಶುಗರ್ ಕಾರ್ಖನೆಯಲ್ಲಿ ಖೇನ್ ಸುಪರ್ಡೆಂಟಾಗಿ ಪ್ರಮಾಣಿಕ ಸೇವೆ ಸಲ್ಲಿಸಿರುತ್ತಾರೆ . ಇವರು ಮಂಡ್ಯಜಿಲ್ಲೆಯ ಕೆರಗೂಡು ವಿದಾನಸಭಾ ಕ್ಷೇತ್ರದಿಂದ ಎರಡುಬಾರಿ ವಿದಾನಸಭೆಗೆ ಸ್ಪರ್ದಿಸಿ ಪರಬವಗೊಂಡರು ಸಹ ಎದೆಗುಂದದೆ ಬಿಜೆಪಿಯ ಮತ್ತೊಂಬ್ಬ ನಾಯಕರಾದ ರಾಮಲಿಂಗಯ್ಯನವರ ಜೋತೆ ಜೋಡಿಈತಿನಮ್ತೆ ದುಡಿದು ಜಿಲ್ಲಿಯಲ್ಲಿ ಪಕ್ಷವನ್ನ ಕಟ್ಟಲು ಶ್ರಮಿಸಿದ್ದಾರೆ.
ಕಿರುಗಾವಲು ಹೋಬಳಿಯ ಸುತ್ತಮುತ್ತಲ ಗ್ರಾಮಪಂಚಾಯಿತಿಗಳಲ್ಲಿ ಬಿಜೆಪಿಯು ಅದಿಕಾರಕ್ಕೆ ಬರಲು ನಾಗರಾಜಪ್ಪನವರು ಪ್ರಮುಖಕಾರಣಕರ್ತರಾಗಿದ್ದು ಪ್ರಪ್ರಥಮವಾಗಿ ಚಿಕ್ಕಮೂಲಗೂಡು ತಾಲುಕು ಪಂಚಾಯಿತಿ ಉಪಚುನಾವಣೆಯಲ್ಲಿ ಬಿಜೆಪಿ ಅಬ್ಯಾರ್ಥಿಯನ್ನ ಜಯಗೂಳಿಸುವಂತೆ ಮಾಡಲು ಇವರು ಪಟ್ಟ ಶ್ರಮ ಅಪಾರವಾದುದು. ಅದೇ ರಿತಿಯಲ್ಲಿ ಅಪರೇಷನ್ ತಾಲುಕುಪಂಚಾಯಿತಿ ಮೂಲಕ ಶ್ರೀರಂಗಪಟ್ಟಣ ತಾಲಿಕು ಪಂಚಾಯಿತಿಯಲ್ಲಿ ಬಿಜೆಪಿಯು ಅದಿಕಾರ ಇಡಿಯುಲು ನಾಗರಾಜಪ್ಪನವರು ಪ್ರಮುಖ ಕಾರಣಕರ್ತರಾಗಿದ್ದಾರೆ
ಮಂಡ್ಯಜಿಲ್ಲೆಯ ಕಿರುಗಾವಲು ಕ್ಷೇತ್ರದಿಂದ ಶಾಸಕರಾಗಿ ಅಯ್ಕೆಯಾಗಿದ್ದ ದೇವಗೌಡರ ಬೀಗರಾದಂತಹ ಡಿಸಿತಮ್ಮಣ್ಣನವರು ಅನೇಕ ಅಬಿವೃದ್ದಿಕಾರ್ಯಕ್ರಮಗಳ ಮೂಲಕ ಜನಮನ್ನಣೆಯನ್ನು ಗಳಿಸಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಮದು-ಮಾದೆಗೌಡರಿಗಾಗಿ ಕಿರುಗಾವಲು ಕ್ಷೇತ್ರವನ್ನು ಬಿಟ್ಟುಕೊಟ್ಟು ಎಸ್ ಎಮ್ ಕ್ರಿಷ್ಣರವರ ಸ್ವಕ್ಷೇತ್ರವಾದ ಮದ್ದೂರಿನಿಂದ ಸ್ಪರ್ದಿಸಿದ್ದ ಡಿ ಸಿ ತಮ್ಮಣ್ಣರವರನ್ನು ಕಾಂಗ್ರೇಸ್ ಪಕ್ಷದವರಾದ ಎಸ್ ಎಮ್ ಶಂಕರ್ (ಎಸ್ ಎಮ್ ಕ್ರಿಷ್ಣ ರವರ ತಮ್ಮ) ಮತ್ತು ಅವರ ಪುತ್ರರಾದ ಮಾಜಿ ಜಿಲ್ಲಾಪಂಚಾಯಿತಿ ಅದ್ಯಕ್ಷ ಗುರುಚರಣ್ ಹಾಗು ಅವರ ಬೆಂಬಲಿಗ  ಕಾಂಗ್ರೇಸ್ ಮುಖಂಡರಗಳ ಚಿತಾವಣಿಯಿಂದ  ಡಿಸಿ ತಮ್ಮಣ್ಣನವರು ಸೋಲುಣ್ಣಬೇಕಾಯಿತು . ಇಂತಹ ಕುತಂತ್ರಗಳಿಂದ ಬೇಸತ್ತಿದ್ದ ಡಿಸಿತಮ್ಮಣ್ಣನವರನ್ನು ಸೂಕ್ತ ಸಮಯದಲ್ಲಿ ಕಾರ್ಯಪರವೃತ್ತರಾದ ನಾಗರಾಜಪ್ಪನವರು ಡಿಸಿತಮ್ಮಣ್ಣನವರನ್ನು ಬಿಜೆಪಿಗೆ ಕರತರುವಲ್ಲಿ ಯಶಸ್ವಿಯಾದರು ಇವರು ಮಾತ್ರವಲ್ಲದೆ ಮಂಡ್ಯ ಜಿಲ್ಲೆಯ ಇನ್ನೂ ಅನೇಕ ಮುಖಂಡರುಗಳನ್ನು  ಪಕ್ಷಕ್ಕೆ  ಕರತರುವಲ್ಲಿ ನಾಗರಾಜಪ್ಪನವರು ಪ್ರಮುಖ ಕಾರಣಕರ್ತರು. ಇವರಲ್ಲಿ ಪ್ರಮುಖರು ಮಂಡ್ಯಜಿಲ್ಲೆಯ ನಾಗಮಂಗಲ ತಾಲುಕಿನಲ್ಲಿ ಎರಡು ಬಾರಿ ಶಾಸಕಾರಗಿ ಅಯ್ಕೆಯಾಗಿದ್ದು ಸಚಿಚರೂ ಅಗಿದ್ದಂತಹ ಎಲ್ ಅರ್ ಶಿವರಾಮೆಗೌಡ. ಕೆರಗೂಡು ಕ್ಷೇತ್ರದಿಂದ ಒಂದು ಬಾರಿ ಶಾಸರಾಗಿ ಅಯ್ಕೆಯಾಗಿದ್ದಂತಹ ಜಿ ಬಿ ಶಿವಕುಮಾರ್, ಉದ್ದಮಿಯೂ ರಾಜಕಾರಣಿಯೂ ಅಗಿದ್ದಂತಹ ದಿ: ನಾಗಣ್ಣನವರ ಪತ್ನಿಯಾದ ವಿದ್ಯನಾಗೇಂದ್ರ, ನಗುವಿನಹಳ್ಳಿ ನಂದಕುಮಾರ್, ಪಾಲಹಳ್ಳಿ ಚಂದ್ರಶೇಖರ್ , ಕೆ ಅರ್ ಪೇಟೆ ಮಾಜಿ ತಾಲ್ಲುಕು ಪಂಚಾಯಿತಿ ಅದ್ಯಕ್ಷರಾದ ಈಶ್ವರ ಪ್ರಾಸದ್, ಪ್ರೇಮ ಯುವರಾಜ್  ಇನ್ನೂ ಮುಂತಾದವರನ್ನು ಪಕ್ಷಕ್ಕೆ ಕರೆತರುವಲ್ಲಿ ನಾಗರಾಜಪ್ಪನವರ ಪಾತ್ರ ಅಪಾರವಾದುದು. 

ಮಂಡ್ಯಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಇಷ್ಟೆಲ್ಲ ಶ್ರಮವಹಿಸಿರುವ ನಾಗರಾಜಪ್ಪನವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ರೋಗಗ್ರಸ್ತ ಮಾತ್ರವಲ್ಲದೆ ಗುಜರಿಗೆ ಮಾರಟ ಮಾಡಬೇಕಿದ್ದ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಅದ್ಯಕ್ಷರನ್ನಾಗಿ ನೇಮಿಸಿ ಅದನ್ನು ಪುನಃಶ್ಚೇತನ ಗೊಳಿಸುವ ಜವಾಬ್ದಾರಿಯನ್ನು ವಹಿಸಿದರು ಈ ಉದ್ದಎಯನ್ನು ಸವಾಲಾಗಿ ಸ್ಪೀಕರಸಿದ ನಾಗರಾಜಪ್ಪನವರು ಗ್ರಾಮ ವಾಸ್ತವ್ಯ ಊಡುವ ಮೂಲಕ ಗ್ರಾಮಗಳಲ್ಲಿ ಸರಣಿ ಸಭೆ ನೆಡೆಸುವ ಮೂಲಕ ರೈರತ ಮನವೋಲಿಸಿ ಕೇವಲ ೮೦ಸಾವಿರ ಟೆನ್ ಕಬ್ಬು ಸರಬರಾಜು ಆಗುತ್ತಿದ್ದ ಪ್ರಮಾಣವನ್ನು ಕೆಲವೇ ದಿನಗಳಲ್ಲಿ ಸರಿ ಸುಮಾರು ೮ ಲಕ್ಷಟೆನ್ ಗಳಿಗೆ ಏರಿಸಿರುವುದು ಪವಾಡವೇ ಸರಿ. ಕಾರ್ಖಾನೆಯಲ್ಲಿ ತಯಾರಾಗುವ ಮೊಲೆಸಸ್ಸ್ ನ್ನು ಮದ್ಯ ತಯಾರಿಕರಿಗೆ ಕಡಿಮೆ ಬೆಲೆಗೆ ಮಾರಾಟವಾಗುವುದನ್ನು ಮನಗಂಡು ಮೈರಮ್, ಮೈವಿಸ್ಕಿ, ಮೈಬ್ರಾಂದಿ ಮುಂತಾದುವುಗಳನ್ನು ತಾಯಾರು ಮಾಡಿವಲ್ಲಿ ಯಶಸ್ವಿಯಾಗುವುದಲ್ಲದೆ ಕಾರ್ಖನೆ ಹೆಚ್ಚು ಹೆಚ್ಚು ಲಾಭ ಬರುವಂತೆ ಮಾಡಿದರು. ಪ್ರತಿ ವರ್ಷ ಕಾರ್ಖಾನೆಯಲ್ಲಿ ದೊರೆಯುವ ಗುಜರಿ ವಸ್ತುಗಳನ್ನು ಹಳೆಯ ಆಡಳಿತ ಮಂಡಳಿಯು ಕೇವಲ ೩೦ಲಕ್ಷರೂ ಗಳಿಗೆ ಮಾರುತ್ತಿದ್ದು. ಇವರು ಅದಿಕಾರ ವಹಿಸಿಕೊಂಡ ನಂತರ ಅದೇ ವಸ್ತುಗಳನ್ನು ೭೩ ಲಕ್ಷಕ್ಕೆ ಮಾರ‍ಾಟವಾಗುವಂತೆ ಮಾಡಿದರು. ಹಳೆಯ ಆಡಳಿತಮಂಡಳಿಯು ಕಾರ್ಖಾನೆ ಸರ್ಬರಾಜು ಅಗುತ್ತಿದ್ದ ಪ್ರತಿ ಟೆನ್ ಸೌದೆಯನ್ನು ೧೮೫೦ ರೂಗಳಿಗೆ ಖರೀದುಸುತ್ತಿದ್ದು ಇವರ ಅದಿಕಾರದ ನಂತರ ಕೇವಲ ೧೨೦೦ ರೂಗಳಿಗೆ ಖರೀದಿಸುವಂತಾಯುತು ಮಾತ್ರ ವಲ್ಲದೆ ಇದರಿಂದ ಕಾರ್ಖನೆ ಪ್ರತಿವರ್ಷ ಕೋಟ್ಯಂರ ರೂಗಳು ಸೋರಿವೊಗುವದನ್ನು ತಡೆದರೂ ಕಾರ್ಖಾನೆಯ ವ್ಯಾಪ್ತಿಯಲ್ಲಿ ಪಾಡುಬಿದ್ದಿದ್ದ, ಕೇವಲ ಸಭೆ-ಸಮಾರಂಭಗಳಿಗೆ ಉಪಯೋಗಿಸುತ್ತಿದ್ದ ಕಾವೇರಿಮಾತೆ ಉದ್ಯಾನವನವನ್ನು ಕೋಟ್ಯಂತರ ರೂಗಳನ್ನು ಖರ್ಚುಮಾಡಿ ಅಬಿವೃದ್ದಿ ಪಡಿಸಿದ್ದು ಮಾತ್ರವಲ್ಲದೆ ನಾಲ್ವಡಿ ಕ್ರಿಷ್ಣರಾಜ ಒಡೆಯರ್ ಮತ್ತು ಕೋಲ್ಮನ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಹಿಂದೆ ಕಾರ್ಖನೆಯಲ್ಲಿ ತಯಾರಾಗುತ್ತಿದ್ದ ಸಕ್ಕೆರೆಯ ಗುಣಮಟ್ಟವು ಖಳಪೆಯಾಗಿದ್ದು ಕಂದುಬಣ್ಣದಿಂದ ಕೂಡಿರುತ್ತಿದ್ದು. ಇವರ ಅದಿಕಾರದ ನಂತರ ಉತ್ತಮ ಗುಣಮಟ್ಟದ ಅಚ್ಚ ಬಿಳಿಸಕ್ಕರೆಯು ತಯಾರಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಸಕ್ಕರೆಯನ್ನು ದೇಶವಿದೇಶಗಲಿಗೆ ರಪ್ಟುಮಾಡಲು ಅನುಕೂಲಕರ್ವಾಗಿದ್ದು, ರೈತರಿಗೆ ಪ್ರತಿಟೆನ್ನಿಗೆ ೧೧೦೦ ರಿಂದ ೧೨೦೦ ರೂಗಳು ಮಾತ್ರ ಪಾವತಿಯಾಗುತ್ತಿತ್ತು ಇವರ ಅದಿಕಾರ ವಹಿಸಿಕೊಂದ ನಂತರ ಪ್ರತಿಟೆನ್ನಿಗೆ ೧೮೦೦ರೂಗಳಷ್ಟು ಬೆಂಬಲ ಬೆಲಯನ್ನು ಕೊಡಲು ಸಾದ್ಯವಾಯಿತು.
ಕಾರ್ಖಾನೆಗೆ ಬೇಕಾಗಿರುವ ವಿದ್ಯುತ್ ನ್ನು ಸ್ವಯಂ ಉತ್ಪಾದಿಸಿಕೊಳ್ಳಲು ಕೋಲ್ಯಾಂಡ ಕಾಮಗಾರಿಯು ಪೋರ್ಣಗೊಂಡಿದ್ದು ಕೋ ಜನರೇಷನ್ ಪ್ರಾರಂಭಕ್ಕೆ ಅಣಿಯಾಗಿದೆ ೧೮ ವರ್ಷದ ಇತಿಹಾಸದಲ್ಲಿ ಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಪಾವತಿ ಮಾಡಲು ಕಷ್ಟವಾಗುತ್ತಿದ್ದಂತಹ ಪರಿಸ್ತಿತಿ ಇತ್ತು ಇವರ ಅದಿಕಾರವದಿಯಲ್ಲಿ ಸರಿಯಾದ ಸಮಯಕ್ಕೆ ವೇತನ ನೀಡುವುದು ಮಾತ್ರವಲ್ಲದೆ ಬೋನಸ್ ಹಣವನ್ನು ಸಹ ಪಾವತಿ ಮಾಡಲಾಗಿದೆ . ಕಾರ್ಖಾನೆಗೆ ಸುಗಮವಾಗಿ ಕಬ್ಬು ಸರಬರಾಜು ಮಾಡಲು ಮಂಡ್ಯಸುತ್ತುಮುತ್ತಲ ಸುಮಾರು ೧೦ ಕಿ.ಮಿ ವ್ಯಾಪ್ತಿಯ ಗ್ರಾಮಗಳಿಂದ ರಸ್ತೆ ನಿರ್ಮಾಣಕ್ಕಾಗಿ ೬೦ಕೋಟಿರೂ ವೆಚ್ಚದಲ್ಲಿ ಕಾಮಗಾರಿ ನೆಡೆಯುತ್ತಿದೆ . 
ಕೇನ್ ಯಾಡ್ ಮತ್ತು ತೋಕದ ಯಂತ್ರ
ಕೇನ್ ಯಾಡ್ ಮತ್ತು ತೋಕದ ಯಂತ್ರವನ್ನು ಎರಡು ಕೋಟಿವೆಚ್ಚದಲ್ಲಿ ಅಬಿವೃದ್ದಿಪಡಿಸಲಾಗಿದೆ ಹಲವಾರು ವರ್ಷಗಳಿಂದ ರೋಗಗ್ರಸ್ತ ಕಾರ್ಖಾನೆಗಳ ಪಟ್ಟಿಯಲ್ಲಿರುವ ಮೈಶುಗರ್ ಸಕ್ಕರೆ ಕಾರ್ಖನೆಯನ್ನು ಮೂರರಿಂದ ಐದು ತಿಂಗಳ ಹೊಳಗೆ ಲಾಭದಾಯಕ ಕಾರ್ಖಾನೆ ಮಾಡುವುದಾಗಿ ನಾಗರಾಜಪ್ಪನವರು ಪಣತೋಟ್ಟೀದ್ದಾರೆ ಬಿಜೆಪಿ ಸರ್ಕಾರವು ಕರ್ನಾಟಕದಲ್ಲಿ ಅದಿಕಾರಕ್ಕೆ ಬಂದ ತದನಂತರದಿಂದ ಒಟ್ಟು ನೂರ ಇಪ್ಪತ್ತಾರು ಕೋಟಿ ರೂಗಳನ್ನು ಮೈಶುಗರ್ ಕಾರ್ಖಾನೆಗೆ ಅನುದಾನವಾಗಿ ನೀಡುವ ಮುಖಾಂತರ ಅರೆಜೀವವಾಗಿದ್ದಕಾರ್ಖಾನೆಯನ್ನು ಪ್ರಗತಿಪತದತ್ತ  ಕೋಂಡುಯ್ಯಲು ನಾಗರಾಜಪ್ಪನವರು ಯಶಶ್ವಿತರಾಗಿದ್ದಾರೆ
ನಾಗರಾಜಪ್ಪನವರ ಅಬಿರತ ಪ್ರಯತ್ನ ದುಡಿತ ಮತ್ತು ಪ್ರಾಮಣಿಕ ಸೇವೆಯಿಂದ ಅಬಿವೃದ್ದಿತ್ತ ದಾಪುಗಾಲಿಡುತ್ತಿರುವ ಮೈಶುಗರ್ ಸಕ್ಕರೆ ಕಾರ್ಖನೆಯು ಪುನಃಶ್ಚೇತನ ಗೊಳ್ಳುವಲ್ಲಿ ಯಾವುದೆ ಸಂಶಯವಿಲ್ಲ ಇದನ್ನು ಮನಗಂಡ ಬಿಜೆಪಿ ಸರ್ಕಾರ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಭಾರತ ಇತಿಹಾಸದಲ್ಲೆ ಪ್ರಪ್ರಥಮವಾಗಿ ಒಬ್ಬ ವ್ಯಕ್ತಿಗೆ ಒಂದೆ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳ ವಹಿಸಿಕೊಟ್ಟಿರುವುದು ನಿಜಕ್ಕೂ ಅಶ್ಚರ್ಯವೇ ಸರಿ. ಮಂಡ್ಯ ಜಿಲ್ಲೆಯ ಪಾಂಡುವಪುರ ತಾಲುಕಿನಲ್ಲಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸಹ ನಾಗರಾಜಪ್ಪನವರ ಮಡಿಲಿಗೆ ಹಾಕಿರುವುದು ನಿಜಕ್ಕು ಒಂದು ಉತ್ತಮ ಹಜ್ಜೆಯೇ ಸರಿ. ಕೋಟಾರಿ ಶುಗರ್ ಕಂಪನಿಯವರಿಗೆ ವಹಿಸಿಕೊಟ್ಟಿದ್ದ ಪಿ ಎಸ್ ಎಸ್ ಕೆ ಯನ್ನು ನಿರ್ಮೂಲನೆ ಮಾಡಲು ಹೊರಟಿದ್ದ ಕೋಟಾರಿ ಶುಗರ್ ರವರಿಂದ ಕಾರ್ಖಾನೆ ಮರಳಿ ಪಡೆದು ಇದನ್ನು ಸಹ ಪುನಃಶ್ಚೇತನಗೊಳಿಸುವ ಕಾರ್ಯ ವಹಿಸಿಕೊಂಡ ನಾಗರಾಜಪ್ಪನವರು ಪ್ರಾರಂಭದಲ್ಲಿ ಅದಕ್ಕಾಗಿ ಸರ್ಕಾರದಿಂದ ಸುಮಾರು ಐದು ಕೋಟಿರೂಗಳನ್ನು ಅನುದಾನವನ್ನಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ ಪಿ ಎಸ್ ಎಸ್ ಕೆ ಯ ಪಕ್ಕದಲ್ಲೆ ಇರುವ ಸುಮಾರು ವರ್ಷಗಳಿಂದ ನಿಂತು ಹೋಗಿದ್ದ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಯಡಿಯೂರಪ್ಪನವರು ಅದಕ್ಕೆ ಸರ್ಕಾರ ದಿಂದ ಮಂಜೂರಾಗ ಬೇಕೊದ್ದ ನುದಾನವನ್ನ ಬಿಡುಗಡೆ ಮಾಡಿ ಕಾಮಗಾರಿಯನ್ನು ಪುನಃ ಪ್ರಾರಂಭಿಸುವದರ ಮೂಲಕ ಸುತ್ತಮುತ್ತಲಿನ ಹಳ್ಳಿಗಳ ರೈತರು ಕಾರ್ಖಾನೆಗೆ ಕಬ್ಬನ್ನು ಸರಾಬರಾಜು ಮಾಡುಲು ಅನುಕೂಲವಾಗುವಂತೆ ಮಾಡಿದರು.

ಮಂಡ್ಯಜಿಲ್ಲಾ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಅಭಿಮಾನಿಗಳ ಸೇವಾ ಸಂಘ.

ಮಂಡ್ಯಜಿಲ್ಲಾ ಬಿಜೆಪಿ ಯುವಘಟಕದ ಪ್ರದಾನ ಕಾರ್ಯದರ್ಶಿಯೂ , ಬಿಜೆಪಿಯ ಯುವನಾಯಕರೂ ಅದ ಜೆತೆಂದ್ರರವರು ಈ ಮಂಡ್ಯಜಿಲ್ಲಾ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಅಭಿಮಾನಿಗಳ ಸೇವಾ ಸಂಘದ ಅದ್ಯಕ್ಷರಾಗಿದ್ದು  ಸಂಘದ ಅಡಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಅಮ್ಮಿಕೊಳ್ಳುವುದರ ಮೂಲಕ ಈ ಸಂಘದ ದ್ಯೇಯವನ್ನು ಎತ್ತಿಹಿಡಿದಿದ್ದಾರೆ. ಇವರು ಸಂಘದವತಿಯಿಂದ ಬಿಎಸ್ ಯಡಿಯೂರಪ್ಪ ಮತ್ತು ನಾಗರಾಜಪ್ಪನವರ ಹುಟ್ಟು ಹಬ್ಬದ ದಿನಗಳಲ್ಲಿ ಬಡಜನರಿಗೆ ಹಸುಗಳನ್ನು ಕೊಡಿಸುವುದು, ಎತ್ತಿನಗಾಡಿಗಳನ್ನು ದಾನಮಾಡುವುದು . ಅಂಗವಿಕಲರಿಗೆ ಮೂರು ಚಂಕ್ರದ ಸೈಕಲ್ ಗಳನ್ನು ಕೊಡುವುದು , ಪ್ರಯಾಣಿಕರ ಆಟೊಗಳನು ಮತ್ತು ಗೂಡ್ಸ ಆಟೊಗಳನ್ನು ನೀಡುವುದು ರುದ್ರಾಶ್ರಮಗಳಿಗೆ ಗ್ರೈಂಡರ್ ಮತ್ತು ಚಾಪೆ , ದಿಂಬು , ಬಟ್ಟೆ ಬರೆ ಮುಂತಾದ್ ಗೃಹಪಯೋಗಿ ವಸ್ತುಗಳನ್ನು ಕೊಡುವುದು ಮತ್ತು ಹೃದಯ ಸಂಜೀವಿನು ಅಡಿಯಲ್ಲಿ ಹೃದ್ರ‍ೋಗ ಚಿಕಿಸ್ತೆಗಾಗಿ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಜಿಲ್ಲೆಯ ಸುಮಾರು ೨೮೨ ಮಂದಿಗೆ ಸರಿ ಸುಮಾರು ೭೦ ಸಾವಿರ ರೂಗಳ ವರೆಗೊ ಪರಿಹಾರ ಈ ಸಂಘವು ಯಶಸ್ವಿಯಾಗಿದೆ  . ಬಡಜನರ ಮತ್ತು ನಿರ್ಗತಿಕ ಜನರಿಗೆ ವೃದ್ಯಾಪ್ಯವೇತನ ಸಂದ್ಯಾಸುರಕ್ಷ ಯೋಜನೆಡಿಯಲ್ಲಿ ದೊರೆಯುವ ವಿವಿದ ಅನುಕೂಲಗಳನ್ನು ಜನರ ಮನೆಗಳಿಗೆ ತಲುಪುವಂತೆ ಮಾಡಲು ಶ್ರಮಿಸಿದ್ದಾರೆ . ಸುಮಾರು ೯ ಮಂದಿ ಮೂತ್ರಪಿಂಡ ರೊಗದಿಂದ ಬಳಲುವ ಜನರಿಗೂ ಸಹ ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಸಹಾಯ ಮಾಡಿಸುವಲ್ಲಿ ನೆರವಾಗಿದ್ದಾರೆ . ಮತ್ತು ಸರ್ಕಾರದ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ "ತಿಂಗಳ ನೆಡೆಗೆ ಹಳ್ಳಿಗಳ ಕಡೆಗೆ" ಯನ್ನು ಇವರು "ಸಂಘದ ನೆಡೆಗೆ ನೊಂದವರ ಕಡೆಗೆ " ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಮಂಡ್ಯನಗರದ ಗಾಂದಿನಗರ , ಶುಗರ್ ಟೌನ್, ಕಲ್ಲಳ್ಳಿ ವಿ ವಿ ನಗರ ಸ್ಲಮ್ ಮತ್ತು ಶಂಕರಮಠಗಳಲ್ಲಿ ಯಶಸ್ವಿಯಾಗಿ ನೆಡಸಿದ್ದಾರೆ . ಈ ಸಂಘದ ಸದಸ್ಯತ್ವವು ಉಚಿತವಾಗಿದ್ದು ಈಗಾಗಲೆ ಸುಮಾರು ೯೫೦೦ ಸದಸ್ಯರುಗಳನ್ನು ಒಳಗೊಂಡಿದೆ

SATISH N GOWDA
BANGALORE (CHIKKABALLAPURA)

No comments:

Post a Comment