Thursday, November 11, 2010

ಈ ಸರ್ಕಾದಲ್ಲಿ ಶಾಸಕರೇ ಲಂಚ ನೀಡಬೇಕು.

ಈ ಸರ್ಕಾದಲ್ಲಿ ಶಾಸಕರೇ ಲಂಚ ನೀಡಬೇಕು.

            ಎಲ್ಲಿಗೆ ಬಂತು ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ. ಈ ಸರ್ಕಾರದಲ್ಲಿ ಕೆಲಸಗಳಾಗಬೆಕೆಂದರೆ ಜನಸಾಮನ್ಯರು ಅಧಿಕಾರಿಗಳಿಗೆ ಲಂಚ ನೀಡುವುದು ಸರ್ವೇಸಾಮನ್ಯ ಗುತ್ತಿಗೆದಾರರು ಸಹ ಎಲ್.ಒ.ಸಿ ಪಡೆಯಲು ಶೇಕಡ ನೀಡುವುದು ಸರ್ಕಾರಿ ನಿಯಮದಷ್ಟೆ ಖಡ್ಡಾಯವಾಗಿದೆ ಕರ್ನಾಟಕ ಇತಿಹಾಸದಲ್ಲಿ ಇದೆಂದು ಕೇಳರಿಯ ದಷ್ಟು ಬ್ರಷ್ಟ ಸರ್ಕಾರ ಇದಾಗಿದ್ದು ಮುಖ್ಯಮಂತ್ರಿ ಮತ್ತು ಅವರ ಸಹ್ಯೋದ್ಯಗಿ ಸಚಿವರುಗಳ ಮಕ್ಕಳೆ ಭೂ ಹಗರಣ ಮತ್ತು ಇನ್ನಿತರ ಕರ್ಮಕಾಂಡಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ಈಗಾಗಲೆ ಮಾದ್ಯಮಗಳ ಮೂಲಕ ತಿಳಿದುಕೊಂಡಿರುವುದು ಸರಿಅಷ್ಟೆ. ಆದರೆ ಇನ್ನೊಂದು ವಿಚಿತ್ರವೆಂದರೆ ಜನಸಾಮನ್ಯರು ಮಾತ್ರವಲ್ಲದೆ ಜನಪ್ರತಿನಿದಿಯಾದ ಶಾಸಕರೆ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳುಬೇಕಾದ ದುಸ್ಥಿತಿ ಒದಗಿಬಂದಿರುವುದು ಖೇದಕರ ಸಂಗತಿಯಾಗಿದೆ . ಈ ವರದಿಯ ಕೇಂದ್ರಬಿಂದುವಾದ ಮಂಡ್ಯಜಿಲ್ಲೆಯ ನಾಗಮಂಗಲ ಕ್ಷೇತ್ರದ ಶಾಸಕರಾದ ಕೆ,ಸುರೇಶ್ ಗೌಡ ತಮ್ಮಕ್ಷೇತ್ರಕ್ಕೆ ಅನುದಾನತರಲು ಸಂಬಂದ ಪಟ್ಟ ಇಲಾಖೆಯ ಸಚಿರೊಬ್ಬರ ಅಪ್ತರಿಗೆ ಲಂಚನೀಡಿರುವುದಾಗಿ ತಿಳಿಸುವುದರ  ಮೂಲಕ ಒಂದು ಹೊಸ ಬಾಂಬ ಸಿಡಿಸಿದ್ದಾರೆ . ಬಿಜೆಪಿ ನೇತ್ರ‍ತ್ವದ ಸರ್ಕಾರದಲ್ಲಿ  ಲಂಚನೀಡಿದರೆ ಮಾತ್ರ ಕೆಲಸ ಕಾರ್ಯಗಳು ಸಲೀಸಾಗಿ ನೆರವೇರುತ್ತವೆ ಎಂದು ಪತ್ರಿಕಾ ಘೋಷ್ಟಿಯಲ್ಲಿ ಬಹಿರಂಗ ಹೇಳಿಕೆ ನೀಡುವುದರ ಮೂಲಕ ಸರ್ಕಾರವನ್ನು ಪೇಚಿಗೆ ಸಿಲುಕಿಸುದ್ದಾರೆ.
  ಮೂರ್ನಾಲ್ಕು ದಿನಗಳ ಹಿಂದೆಯಷ್ಟೆ ಮಂಡ್ಯ ಜಿಲ್ಲೆಯ ಸಂಸದರಾದ ಎನ್, ಚಲುವರಾಯಸ್ವಾಮಿ ಅನುದಾನ ಬಿಡುಗಡೆಗಾಗಿ ಜೆಲ್ಲೆಯ ಶಾಸಕರೊಬ್ಬರು ಸಚಿವರೊಬ್ಬರಿಗೆ ಐದುಲಕ್ಷ ರೂ ಲಂಚ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರಾದರೂ ಲಂಚ ನೀಡಿದ್ದ ಶಾಸಕ ಮತ್ತು ಲಂಚಪಡೆದ ಸಚಿವರ ಹೆಸರನ್ನು ಅವರು ಬಹಿರಂಗ ಪಡಿಸಿರಲಿಲ್ಲವಾದರು ಈ ಹೇಳಿಕೆ ಬಳಿಕ ಎಲ್ಲರ ಚಿತ್ತ ಸುರೇಶ್ ಗೌಡರತ್ತ ನೆಟ್ಟಿತ್ತು ಅವರೀಗ ಲಂಚ ನೀಡಿರುವ ಶಾಸಕ ತಾನೆ ಎಂದು ಒಪ್ಪಿಕೊಳ್ಳುವ ಮೂಲಕ ಚಲುವರಾಯಸ್ವಾಮಿ ಹೇಳಿಕೆಗೆ ಪುಷ್ಟಿನೀಡಿದ್ದಾರೆ ಆದರೆ ಲಂಚಪಡೆದ ಸಚಿವಮಹಾಶೆಯನ ಹೆಸರನ್ನು ಶಾಸಕರು ಸಹ ಬಹಿರಂಗ ಪಡಿಸದೆ ನಿಗೂಡವಾಗಿಟ್ಟಿರುವುದು ಎಲ್ಲರಲ್ಲು ಕುತೂಹಲವನ್ನು ಎಬ್ಬಿಸಿದೆ.
        ಶಾಸಕ ಸುರೇಶ್ ಗೌಡರು ಇದೊಂದು ನಾಚಿಕೆಗೇಡಿನಸಂಗತಿಯಾಗಿದ್ದು ಲಂಚ ನೀಡುವುದು ತಪ್ಪೆಂದು ನನಗೂ ಗೊತ್ತು , ಆದರೆ ಅನಿವಾರ್ಯ ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ ಇಂತಹ ಕೆಟ್ಟ ಸರ್ಕಾರದಲ್ಲಿ ನಾನು ಶಾಸಕನಾಗಿರುವುದಕ್ಕೆ ನೊವುಂಟಾಗಿದೆ ಕೇವಲ ಒಂದೆರಡು ಲಕ್ಷವಲ್ಲ , ಲಕ್ಷಾಂತರ ರೂಗಳನ್ನು ಸಂಬಂಧಪಟ್ಟ ಇಲಾಖೆಯ ಸಚಿವರ ಆಪ್ತರಿಗೆ ನೀಡಿ ಕಾಮಗಾರಿಗಳನ್ನು ಮಾಡಿಸಿಕೊಂಡು ಅನುದಾನ ತಂದಿದ್ದೆನೆ ತನ್ನ ಕ್ಷೇತ್ರದ ಅಬಿವೃದ್ದಿಗೆ ಅಡ್ಡಿಯಾಗಬಾರದೆಂಬ ಹಿನ್ನಲೆಯಲ್ಲಿ ಆ ಸಚಿವರ ಹೆಸರನ್ನು ಸದ್ಯಕ್ಕೆ ಬಹಿರಂಗ ಪಡಿಸಲಾರೆ ಸಮಯ ಬಂದಾಗ ಎಲ್ಲವನ್ನು ಜನರ ಮುಂದೆ ಇಡುತ್ತೆನೆ.
        ಯಾವ ಸಚಿವರು ನೇರವಾಗಿ ಲಂಚದ ಹಣ ಪಡೆಯುವುದಿಲ್ಲ ಎಲ್ಲಾ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಅವರವರ ಏಜಂಟರಿರುತ್ತಾರೆ . ಅವರುಗಳ ಮೂಲಕ ಸಂಬಂಧಪಟ್ಟವರಿಗೆ ಹಣ ರವಾನೆಯಾಗುತ್ತದೆ ಆದರೆ ಇಂತಹ ಪ್ರಕ್ರಿಯೆಯಲ್ಲಿ ಬಲಿಪಶುಗಳಾಗುತ್ತಿರುವವರು ಮಾತ್ರ ಜನಸಾಮನ್ಯರು ಮತ್ತು ನಮ್ಮಂತಹವರು ಮಾತ್ರ. ಆದ್ದರಿಂದ ಈ ಸರ್ಕಾರದಲ್ಲಿ ನೆಡೆಯುತ್ತಿರುವ ಬ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ಈಗಾಗಲೆ ದೂರು ನೀಡಿದ್ದು ಅವರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಧಾರದ ಮೇಲೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುತ್ತೆವೆಂದು ತಿಳಿಸಿದ್ದಾರೆ.
 ಈಶ್ವರಪ್ಪ ತೀಕ್ಷ್ಣ ಪ್ರತಿಕ್ರಿಯೆ.
ಬಿಜೆಪಿಯ ರಾಜ್ಯದ್ಯಕ್ಷರಾದ ಈಶ್ವರಪ್ಪ ಲಂಚನೀಡಿರುವ ಶಾಸಕನ ಬಂದನಕ್ಕೆ ಒತ್ತಾಯ ಮಾಡಿದ್ದಾರೆ ತಮ್ಮ ಕ್ಷೇತ್ರಕ್ಕೆ ಅನುದಾನ ತರಲು ಸಚಿವರೊಬ್ಬರಿಗೆ ಲಂಚನೀಡಿರುವುದಾಗಿ ಹೇಳಿರುವ ನಾಗಮಂಗಲ ಶಾಸಕ ಸುರೇಶ್ ಗೌಡನನ್ನು ತಕ್ಷಣವೇ ಬಂದಿಸಬೇಕೆಂದು ಈಶ್ವರಪ್ಪ ಹೇಳಿದ್ದಾರೆ. ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡು  ಕಾನೂನು ಬಾಹಿರ ಎಂಬುದು ಗೊತ್ತಿದ್ದರು ಸಹ ಸುರೇಶ್ ಗೌಡರು ಲಂಚ ನೀಡಿರುವುದಾಗಿ ಸ್ವತಃ ತಾವೆ ಹೇಳಿಕೊಂಡಿರುವುದರಿಂದ ಅವರನ್ನು ತಕ್ಷಣವೆ ಬಂದಿಸಬೇಕೆಂದು ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದೆನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
    ಲಂಚ ನೀಡಿರುವುದು ಯಾರಿಗೆ ? ಮತ್ತು ಯಾರು ತೆಗೆದುಕೊಂಡಿರುತ್ತಾರೆ ಎನ್ನುವುದರ ಬಗ್ಗೆ ಕೋಲಂಕುಶ ತನಿಖೆ ನೆಡೆದ ನಂತರ ತಪ್ಪಿತಸ್ಥರ ವಿರುದ್ದ ಸೂಕ್ಥಕ್ರಮ ತೆಗುದುಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಆಷ್ಟೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಸುರೇಶ್ ಗೌಡ ದೈರ್ಯವಿದ್ದರೆ ನನ್ನನ್ನು ಬಂದಿಸಲಿ ಎನ್ನುವ ಮೂಲಕ ಸರ್ಕಾರಕ್ಕೆ ಸವಾಲು ಒಡ್ಡಿದ್ದಾರೆ. ಲಂಚ ನೀಡಿದ ಆರೋಪದ ಹಿನ್ನಲೆಯಲ್ಲಿ ತಮ್ಮನ್ನು ಬಂದಿಸುವಂತೆ ಬಿಜೆಪಿ ರಾಜ್ಯದ್ಯಕ್ಷ ಕೆ,ಎಸ್ ಈಶ್ವರಪ್ಪ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್ ಗೌಡ ಈ ಸರ್ಕಾರಕ್ಕೆ ಸತ್ಯ ಹೇಳುವುದೆ ಅಪತ್ಯ ಎಂದು ಚೇಡಿಸಿದ್ದಾರೆ. ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ಲಂಚಗುಳಿತನ ಜಗತ್ ಜಾಹಿರಾಗಿದ್ದು, ಇದೊಂದು ಬ್ರಷ್ಟ ಸರ್ಕಾರ ಎನ್ನುವುದು ರಾಜ್ಯದ ಜನಸಾಮನ್ಯರಿಗೆ ಗೊತ್ತಿರುವ ಸಂಗತಿಯಾಗಿದ್ದು ತಾವು ಹೇಳಿಕೆ ನೀಡುರುವುದರಲ್ಲ ಯಾವುದೆ ರೀತಿಯ ತಪ್ಪಿಲ್ಲ ಎಂದು ಸಮರ್ತಿಸಿಕೊಂಡಿದ್ದಾರೆ. ಶಾಸಕರೇ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳ ಬೇಕಾದ ಸ್ಥಿತಿ ಈ ಹಿಂದಿನ ಯಾವಸರ್ಕಾರದಲ್ಲೂ ಇರಲಿಲ್ಲ  . ಬಹುಶಃ ಮುಂದೆಯೂ ಬರಲಾರದು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 


 SATISH N GOWDA

No comments:

Post a Comment