Thursday, November 11, 2010

ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅದ್ಯಕ್ಷರಾಗಿ ಪ್ರೋ ಜಿ,ವೆಂಕಟಸುಬ್ಬಯ್ಯ

 SATISH N GOWDA              
      
          ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅದ್ಯಕ್ಷರಾಗಿ ಪ್ರೋ ಜಿ,ವೆಂಕಟಸುಬ್ಬಯ್ಯ ಮುಂದಿನತಿಂಗಳು ಬೆಂಗಳೂರಿನಲ್ಲಿ ನೆಡೆಯುವ ೭೭ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷರಾಗಿ ಅಪೂರೂಪದ ಭಾಷ ವಿಗ್ನಾನಿ ಕನ್ನಡ ನಾಡಿನ ಸಾಹಿತ್ಯ , ಸಾಸೃತಿಕ ಲೋಕದ ಧಿಮಂತ ಚೇತನ ವಿದ್ವಾಂಸ ಹಾಗು ನಿಗಂಟು ತಗ್ನ ಪ್ರೋ, ಜಿ, ವೆಂಕಟಸುಬ್ಬಯ್ಯನವರು ಸರ್ವಾನುಮತದಿಂದ ಅಯ್ಕೆಯಾಗಿದ್ದಾರೆ. ಡಿ.೨೪ ರಿಂದ ೨೬ರ ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆಡೆಯಲಿರುವ ಸಮ್ಮೇಳನಕ್ಕೆ ಅದ್ಯಕ್ಷರ ಹುದ್ದೆಗೆ ಸೂಕ್ಥ ವ್ಯಕ್ತಿಯನ್ನು ಅಯ್ಕೆ ಮಾಡುವ ಮೂಲಕ ಸಮ್ಮೇಳನ ಸಮಿತಿ ಕನ್ನಡ ಹಬ್ಬದ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ನಡೆದಾಡುವ ವಿಶ್ವಕೋಶ , ಶಬ್ದ ಬ್ರಹ್ಮ ಎಂದೇ ಖ್ಯತರಾದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ಮೂಲತಃ ಮಂಡ್ಯಜಿಲ್ಲೆಯ ಶ್ರೀರಂಗ ಪಟ್ಟಣದ ಬಳಿಯ ಗಂಜಾಂ ನವರಾಗಿದ್ದು ಕನ್ನಡ ಸಂಸೃತ ವಿದ್ವಾಂಸ ಗಂಜಾಂ ತಿಮ್ಮಯ್ಯ ನವರ ಮಗನಾದ ಇವರು ೧೯೧೩ರಲ್ಲಿ ಜನಿಸಿದರು . ಮೈಸೂರು ಮಹಾರಾಜರ ಕಾಲದಲ್ಲು ಸ್ವರ್ಣಪದಕದೊಡನೆ ಎಂ,ಎ ಪದವಿ ಪಡೆದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ಬಳಿಕ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ , ವಿಭಾಗ ಮುಖ್ಯಸ್ತರಾಗಿ ಸೇವೆ ಸಲ್ಲಿಸಿದ್ದಾರೆ.
   ಕನ್ನಡನಾಡುತಂಡ ಈ ಅತ್ಯತ್ತಮ ಬಾಷಾ ತಗ್ನನ ಅಯ್ಕೆಗೆ ಕಿಂಚುತ್ತು ವಿರೋದ ವ್ಯಕ್ತಪಡಿಸಲಿಲ್ಲ ಎಂಬುದು ಅತಿಷಯವೇನಲ್ಲ, ಏಕೆಂದರೆ ವಿದ್ಯ, ವಿದ್ವತ್ತು, ಪ್ರತಿಬೆ ಜೊತೆಗೆ ವಿನಯಶಿಲತೆ ಮೈತುಂಬಿಸಿಕೊಂಡಿರುವ ಪ್ರೋ, ಜಿ, ವೆಂಕಟಸುಬ್ಬಯ್ಯನವರುದು ಸಾರಸ್ವ ಲೋಕದ ಅಪರೂಪದ ವ್ಯಕ್ತಿತ್ವ. ಹಳೆಯ ತಲಾಮಾರಿನ ಈ ಹಿರಿಯರ ಚಿಂತನೆ ಮಾತ್ರ ನಿರಂತರ ಬದಲಾವಣೆಗೆ ಒಡ್ಡಿಕೊಂಡಿರುವುದು ಅವರ ಅನೇಕ ಮಾತು,ಕೃತಿಗಳಿಂದಲೇ ಸ್ವಷ್ಟವಾಗುತ್ತದೆ. ಇವರೊಬ್ಬ ಉದಾರ ಮತ್ತು ವಿಚಾರವಾದಿಯಾದ ಭಾಷಾ ವಿಘ್ನಾನಿಯಾಗಿದ್ದು ಹಿರಿಯರು,ಕಿರಿಯರು ಎನ್ನದೆ ಎಲ್ಲರಿಗೊ ಅಪ್ತಾರಾಗಿದ್ದಾರೆ . ಶಿಕ್ಷಣ ಸಾಹಿತ್ಯ, ವಿಮರ್ಷೆ, ಬಾಷ ಸಂಶೋಧನೆ, ಹಿಗೇ ವಿವಿದ ಪ್ರಾಕಾರಗಳಲ್ಲಿ ಭಾಷ ಸಂಪತ್ತನ್ನು ವೃದ್ದಿಗೊಳಿಸಿದ ಇವರು ನೆಡೆದಾಡುವ ನಿಘಂಟು ಎಂದೆ ಖ್ಯಾತರಾಗಿದ್ದಾರೆ. ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಹರ್ನಿಸಿ ದುಡಿದು ಶಿಷ್ಯವೃಂದಕ್ಕೆ ಘ್ನಾನ ದಿವಿಗೆಯಾದ ಪ್ರೋ, ಜಿ, ವೆಂಕಟಸುಬ್ಬಯ್ಯನವರು  ನಿರಂತರ ಭಾಷ ಸಂಶೊಧನೆಯಲ್ಲಿ ತೊಡಗಿಸಿಕೊಂಡಿರುವುದರ ಪಲವೇ ಈ " ಅಮೂಲ್ಯ ನಿಘಂಟು"ಗಳು.
   ಅಖಿಲ ಭಾರತ ನಿಘಂಟು ಕಾರ್ಯ ಸಂಘಕ್ಕೆ ಅನೇಕ ವರ್ಷಗಳ ಕಾಲ ಉಪಾದ್ಯಕ್ಷರಾಗಿದ್ದ ಪ್ರೋ, ಜಿ, ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಿನ ಪ್ರದಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವುಗಳಿಂದಗಿ ಇಂದು ಕನ್ನಡ ಭಾಷ ಸಂಪತ್ತು. ವಿಪುಲವಾಗಿದೆ. ಕನ್ನಡ ಅದ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆಂದು ಆರಂಭವಾದ ಇವರ "ಇಗೋ ಕನ್ನಡ" ಅಂಕಣ ಕ್ರಮೇಣ ಜನಸಾಮನ್ಯರ ಆಸಕ್ತಿಯನ್ನು ಉತ್ತೇಜಿಸಿತು . ಪತ್ರಿಕೆಗೆ ಹಾಗು ಪ್ರೋ, ಜಿ, ವೆಂಕಟಸುಬ್ಬಯ್ಯನವರಿಗೆ ಬರುತ್ತಿದ್ದ ಪ್ರಶ್ನೆಗಳು ಅದಕ್ಕೆ ಸಾಕ್ಷಿಯಾಗಿವೆ . ಕನ್ನಡ ಭಾಷೆ ಹಾಗು ಪದಗಳ ಉತ್ಪತ್ತಿಯ ವಿವರ ತಿಳಿಯಬಯಸುವ ಅನೇಕ ಅನೇಕ ಜನಸಾಮನ್ಯರ ಆಸಕ್ತಿಕಂಡು ಪ್ರೋ, ಜಿ, ವೆಂಕಟಸುಬ್ಬಯ್ಯನವರು ವಿಸ್ಮಯಗೊಂಡಿದ್ದರು. ಈಗ "ಇಗೋ ಕನ್ನಡ " ಪುಸ್ತಕ ರೂಪದಲ್ಲಿ ನಾಡಿನ ಮನೆಮನೆಗಳಲ್ಲಿ ಬೆಳಗುತ್ತಿರುವುದು ಪ್ರೋ, ಜಿ, ವೆಂಕಟಸುಬ್ಬಯ್ಯನವರ ಜನಪ್ರಿಯತೆಗೊಂದು ನಿದರ್ಶನವಾಗಿದೆ. ಕನ್ನಡ ಭಾಷ ಬೆಳವಣಿಗೆಗೆ ಹಾಗು ಕೆಲೆವೆಡೆ ಕನ್ನಡ ಬಳುಸುತ್ತಿರುವ ಬಗೆಗೆ ಅವರು ಹಾಗಾಗ್ಗೆ ನೀಡಿರುವ ಅಬಿಪ್ರಾಯಗಳು ಅವರ ಕಾಳಜಿಯನ್ನು ಎತ್ತಿ ತೊರಿಸುತ್ತದೆ ಕನ್ನಡ ಆಡುಮಾತಿನಲ್ಲಿ ಪ್ರಾಸರ ಮಾದ್ಯಮಗಳಲ್ಲಿ ಅಗುತ್ತಿರುವ ತಪ್ಪುಗಳು ಭಾಷೆಗೆ ಗೌರವ ತರುವಂತದ್ದಲ್ಲ ಎಂಬ ಎಚ್ಚರಿಕೆಯ ನುಡಿಗಳು ಇವೆ. ಸರ್ಕಾರದ ಪ್ರಕಟಣೆ, ಪತ್ರವ್ಯವಹಾರ, ಪ್ರಸಾರ ಮಾದ್ಯಮಗಳಲ್ಲಿ ಸರಳ ಕನ್ನಡ ಉಪಯೋಗಕ್ಕಾಗಿ ಅಂದೋಲನ ನಡೆಯಬೇಕೆನೊ ಎಂಬ ಮಾತು ಇಂದಿಗೂ ಧಿಟ. ಕಂಪ್ಯೂಟರ ಭಾಷೆಯನ್ನು ಕನ್ನಡಕ್ಕೆ ಅನುವಾದ ಮಾಡಬೇಕೆ ಅಥವಾ ನೇರ ಬಳಕೆ ಉಚಿತವೇ ಎಂಬ ವ್ಯಾಪಕ ಚರ್ಚೆಗೆ ಇದು ಸೂಕ್ತ ಸಮಯವಾಗಿದೆ. ನಾವಂತು ಕನ್ನಡಕ್ಕೆ ಹೊಂದುವ ಯಾವ ಶಬ್ದವನ್ನಾದರು ನೇರವಾಗಿ ಅಮದು ಮಾಡಿಕೊಳ್ಳಲು ಸಿದ್ದರಿದ್ದೆವೆ ಎಂದು ಹೇಳುವ  ಪ್ರೋ, ಜಿ, ವೆಂಕಟಸುಬ್ಬಯ್ಯನವರು ನಾವು ಖಂಡಿತ ಹಳೆಪೀಳಿಗೆಯವರೆಂದು ಭಾವಿಸುವುದು ತಪ್ಪಾಗುತ್ತದೆ. ಕನ್ನಡಕ್ಕೆ ಹೊಸದೊಂದು ಅಧುನುಕ ಕನ್ನಡ ವ್ಯಾಕರಣ ನಿರ್ಮಾಣ ಮಾಡ ಬೇಕೆಂಬ ಅಗತ್ಯವಿದೆ ಎಂಬ ತುಡಿತವೂ ಅವರಲ್ಲಿದೆ ಭಾಷೆ ನಿರಂತರವಾಗಿ ಬೆಳೆಯಬೇಕಾದರೆ ಅದಕ್ಕೆ ಯಾವುದೆ ಚೌಕಟ್ಟಿನ ಅವಶ್ಯಕತೆ ಇಲ್ಲ ಅನ್ಯದೇಶ ಶಬ್ದಗಳು ಕನ್ನಡ ಭಾಷೆಯ ವ್ಯಾಪ್ತಿಯನ್ನು ವಿಸ್ತರಗೊಳಿಸುತ್ತವೆ ಎನ್ನುವ ಪ್ರೋ, ಜಿ, ವೆಂಕಟಸುಬ್ಬಯ್ಯನವರನ್ನು ನವಯುಗಕ್ಕೆ ಹೊಂದಿಕೊಳ್ಳುವ ಉತ್ತಮ ವಿಶಿಷ್ತ ವ್ಯಕ್ತಿ ಎಂದು ಪರಿಗಣಿಸಿದರೆ ತಪ್ಪಾಗಲಾರದು.

 SATISH N GOWDA

No comments:

Post a Comment